Thursday, June 18, 2026

ಬೌದ್ಧಿಕ ಗುಲಾಮಗಿರಿಯ ಅಸಲಿ ಸೂತ್ರಧಾರ: ವಾಟ್ಸಾಪ್ ಯೂನಿವರ್ಸಿಟಿ ಕರ್ತೃ...

June 19, 2026

ಬೌದ್ಧಿಕ ಗುಲಾಮಗಿರಿಯ ಅಸಲಿ ಸೂತ್ರಧಾರ: ವಾಟ್ಸಾಪ್ ಯೂನಿವರ್ಸಿಟಿ ಕರ್ತೃ...

ಭಾರತಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿವೆ. ಬ್ರಿಟಿಷರು ದೈಹಿಕವಾಗಿ ನಮ್ಮ ದೇಶವನ್ನು ಬಿಟ್ಟು ತೊಲಗಿದ್ದಾರಾದರೂಇಂದಿಗೂ ನಮ್ಮ ಶಿಕ್ಷಣ ಪದ್ಧತಿನಮ್ಮ ಇತಿಹಾಸದ ಪಠ್ಯಗಳುನಮ್ಮ ರಾಜಕೀಯ ಚರ್ಚೆಗಳು ಮತ್ತು ಸಮಾಜವನ್ನು ನಾವು ನೋಡುವ ದೃಷ್ಟಿಕೋನ ಮಾತ್ರ ಬ್ರಿಟಿಷರು ಬಿಟ್ಟುಹೋದ ಚೌಕಟ್ಟಿನಿಂದ ಆಚೆಗೆ ಬಂದಿಲ್ಲ. ನಾವು ಇಂದಿಗೂ "ಮೆಕಾಲೆ ಶಿಕ್ಷಣ ಪದ್ಧತಿ ನಮ್ಮನ್ನು ಬೌದ್ಧಿಕವಾಗಿ ಗುಲಾಮರನ್ನಾಗಿಸಿತು" ಎಂದು ಲಾರ್ಡ್ ಮೆಕಾಲೆಯನ್ನು ದೂಷಿಸುತ್ತೇವೆ. ಆದರೆಭಾರತೀಯ ಚಿಂತನೆಗಳನ್ನು ವ್ಯವಸ್ಥಿತವಾಗಿ ಶೋಷಣೆಯ ಕೂಪ ಎಂದು ಬಿಂಬಿಸಿಮೆಕಾಲೆಗೆ ಅಂತಹದೊಂದು ವಿಷಕಾರಿ ಆಲೋಚನೆ ಮೂಡಲು ಕಾರಣನಾದ ಅಸಲಿ ಸೂತ್ರಧಾರನೊಬ್ಬ ಇತಿಹಾಸದ ಪುಟಗಳಲ್ಲಿ ಅಡಗಿದ್ದಾನೆ. ಆತನ ಹೆಸರುಜೇಮ್ಸ್ ಮಿಲ್! ಈತನನ್ನು ಭಾರತದಲ್ಲಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಕರೆಯುವ ಸುಳ್ಳಿನ ಆಧಾರದ “ವಾಟ್ಸಾಪ್ ಯೂನಿವರ್ಸಿಟೀ” ಯ ಪಿತಾಮಹ ಎನ್ನಬಹುದು.

ಪ್ರಸಿದ್ಧ ಸಂಶೋಧಕ ಹಾಗೂ ವಿದ್ವಾಂಸ ಡಾ. ಕುಂದನ್ ಸಿಂಗ್ ಅವರು ಬಿಚ್ಚಿಟ್ಟಿರುವ ಸತ್ಯಗಳುಭಾರತದ ಮೇಲೆ ನಡೆದಿರುವುದು ಕೇವಲ ಆರ್ಥಿಕ ಲೂಟಿಯಲ್ಲಅದು ನಮ್ಮ ಮನಸ್ಸುಗಳ ಮೇಲಾದ ವ್ಯವಸ್ಥಿತ ಆಕ್ರಮಣ ಎಂಬುದನ್ನು ಸಾಬೀತುಪಡಿಸುತ್ತವೆ.


ಬ್ರಿಟನ್‌ನ 'ಪಾಲಿನ ಪಾಪ'ವನ್ನು ಭಾರತದ ತಲೆಗೆ ಕಟ್ಟಿದ ಇತಿಹಾಸಕಾರ!

ಜೇಮ್ಸ್ ಮಿಲ್ 1817 ರಲ್ಲಿ ಮೂರು ಬೃಹತ್ ಸಂಪುಟಗಳ"ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ" ಎಂಬ ಪುಸ್ತಕವನ್ನು ಬರೆದನು. ಅತ್ಯಂತ ಆಘಾತಕಾರಿ ವಿಷಯವೆಂದರೆಈ ಜೇಮ್ಸ್ ಮಿಲ್ ತನ್ನ ಇಡೀ ಜೀವಮಾನದಲ್ಲಿ ಎಂದಿಗೂ ಭಾರತಕ್ಕೆ ಕಾಲಿಟ್ಟವನೇ ಅಲ್ಲ! ಆಕಸ್ಮಿಕವಾಗಿಯೂ ಆತ ಯಾವುದೇ ಒಬ್ಬ ಸಾಂಪ್ರದಾಯಿಕ ಹಿಂದೂವನ್ನು ಕಣ್ಣಾರೆ ಕಂಡವನೂ ಅಲ್ಲ. ಹಾಗಾದರೆ ಆತ ಲಂಡನ್‌ನಲ್ಲಿ ಕುಳಿತು ಭಾರತದ ಇತಿಹಾಸವನ್ನು ಹೇಗೆ ಬರೆದ?

ಇಲ್ಲೇ ಇರುವುದು ಬ್ರಿಟಿಷರ ಅತಿ ದೊಡ್ಡ ಬೌದ್ಧಿಕ ವಂಚನೆ. 18ನೇ ಶತಮಾನದ ಬ್ರಿಟನ್‌ನಲ್ಲಿ ಚರ್ಚ್ ಪಾದ್ರಿಗಳು ಮತ್ತು ಜಮೀನ್ದಾರರು ಜನರನ್ನು ಕ್ರೂರವಾಗಿ ಶೋಷಿಸುತ್ತಿದ್ದರು. ಬಡವರಿಗೆ ಯಾವುದೇ ಹಕ್ಕುಗಳಿರಲಿಲ್ಲ. ಜೇಮ್ಸ್ ಮಿಲ್ ಭಾರತದ ಬಗ್ಗೆ ಬರೆಯುವಾಗ ತನ್ನದೇ ದೇಶದ ಈ ಕೆಟ್ಟ ವ್ಯವಸ್ಥೆಯನ್ನು ಮನಸ್ಸಿನಲ್ಲಿಟ್ಟುಕೊಂಡು"ನಮ್ಮ ದೇಶದಲ್ಲಿ ಪಾದ್ರಿಗಳು ಶೋಷಣೆ ಮಾಡುವ ಹಾಗೆ ಭಾರತದಲ್ಲಿ ಬ್ರಾಹ್ಮಣರು ಮಾಡುತ್ತಿರಬೇಕುನಮ್ಮಲ್ಲಿ ಜಮೀನ್ದಾರರು ಇರುವ ಹಾಗೆ ಅಲ್ಲಿ ಕ್ಷತ್ರಿಯರು ಇರಬೇಕು" ಎಂದು ಕಲ್ಪಿಸಿಕೊಂಡು ಇಡೀ ಭಾರತೀಯ ಸಮಾಜವನ್ನು ಅತ್ಯಂತ ಅನಾಗರಿಕಕ್ರೂರಿ ಮತ್ತು ಇತಿಹಾಸ ಪ್ರಜ್ಞೆ ಇಲ್ಲದ ಸಮಾಜ ಎಂದು ಚಿತ್ರಿಸಿದನು. ಅಂದರೆಬ್ರಿಟನ್‌ನ ಶೋಷಣೆಯ ಇತಿಹಾಸವನ್ನೇ ಭಾರತದ ಮುಖದ ಮೇಲೆ ಹಿಡಿದುಭಾರತವೇ ಕಪ್ಪಾಗಿದೆ ಎಂದು ಜಗತ್ತಿಗೆ ಸಾರಿದನು.


ಶತ್ರುಗಳನ್ನೇ ಒಂದಾಗಿಸಿದ 'ಹಿಂದೂ ವಿರೋಧಿಸಿದ್ಧಾಂತ

ಬ್ರಿಟನ್ನಿನ ಆಂತರಿಕ ರಾಜಕೀಯದಲ್ಲಿ ಲಾರ್ಡ್ ಮೆಕಾಲೆ ಮತ್ತು ಜೇಮ್ಸ್ ಮಿಲ್ ಒಬ್ಬರಿಗೊಬ್ಬರು ಕಡು ವೈರಿಗಳಾಗಿದ್ದರು. ಆದರೆಭಾರತವನ್ನು ಬೌದ್ಧಿಕವಾಗಿ ಮಟ್ಟಹಾಕಬೇಕು ಎನ್ನುವ ವಿಷಯ ಬಂದಾಗ ಈ ಇಬ್ಬರು ಜನ್ಮಶತ್ರುಗಳು ಒಂದಾದರು!

ಜೇಮ್ಸ್ ಮಿಲ್‌ನ ಶಿಫಾರಸ್ಸಿನ ಮೇರೆಗೆ ಮೆಕಾಲೆ ಭಾರತದ ಉನ್ನತ ಮಂಡಳಿಯ ಸದಸ್ಯನಾಗಿ ಕೊಲ್ಕತ್ತಾಗೆ ಬಂದನು. ಮೆಕಾಲೆ 1835 ರಲ್ಲಿ ಭಾರತೀಯ ಶಿಕ್ಷಣವನ್ನು ನಾಶ ಮಾಡಲು ತಂದ ನೀತಿಗೆ ಅಡಿಪಾಯವಾಗಿದ್ದೇ ಜೇಮ್ಸ್ ಮಿಲ್ ಬರೆದ ಸುಳ್ಳು ಇತಿಹಾಸದ ಪುಸ್ತಕ. ಇಂಗ್ಲೆಂಡ್‌ನಿಂದ ಭಾರತವನ್ನು ಆಳಲು ಬರುತ್ತಿದ್ದ ಬ್ರಿಟಿಷ್ ಅಧಿಕಾರಿಗಳಿಗೆ ಇದೇ ಪುಸ್ತಕವನ್ನು ಕಡ್ಡಾಯ ಪಠ್ಯವಾಗಿ ಓದಿಸಲಾಗುತ್ತಿತ್ತು. ಅಂದರೆಬ್ರಿಟಿಷ್ ಅಧಿಕಾರಿಗಳು ಭಾರತಕ್ಕೆ ಕಾಲಿಡುವ ಮುನ್ನವೇ "ಹಿಂದೂಗಳು ಅತ್ಯಂತ ಹಿಂದುಳಿದವರುಶೋಷಕರು" ಎಂಬ ನಂಜನ್ನು ತಲೆಯಲ್ಲಿ ತುಂಬಿಕೊಂಡು ಬರುತ್ತಿದ್ದರು.


ಆಧುನಿಕ ಮಾರ್ಕ್ಸ್‌ವಾದ ಮತ್ತು ಉದಾರವಾದದ ಮೂಲ ಬೇರು

ಜೇಮ್ಸ್ ಮಿಲ್ ಬಿತ್ತಿದ ಈ ವಿಷಬೀಜ ಕೇವಲ ಬ್ರಿಟಿಷರಿಗೆ ಮಾತ್ರ ಸೀಮಿತವಾಗಿ ಉಳಿಯಲಿಲ್ಲ. ಇಂದಿನ ಜಗತ್ತನ್ನು ಆಳುತ್ತಿರುವ ಎರಡು ದೊಡ್ಡ ಸಿದ್ಧಾಂತಗಳಾದಮಾರ್ಕ್ಸ್‌ವಾದ ಮತ್ತು ಉದಾರವಾದ (ಲಿಬರಲಿಸಂ)ಎರಡೂ ಕೂಡ ಜೇಮ್ಸ್ ಮಿಲ್‌ನ ಸಿದ್ಧಾಂತದ ಮೇಲೆಯೇ ನಿಂತಿವೆ.

  • ಉದಾರವಾದದ ವಂಚನೆ: ಆಧುನಿಕ ಉದಾರವಾದದ ಪಿತಾಮಹ ಎಂದು ಕರೆಯಲ್ಪಡುವ ಜಾನ್ ಸ್ಟುವರ್ಟ್ ಮಿಲ್ ಬೇರೆ ಯಾರೂ ಅಲ್ಲಇದೇ ಜೇಮ್ಸ್ ಮಿಲ್‌ನ ಮಗ! ಈತ ಜಗತ್ತಿಗೆ ಸ್ವಾತಂತ್ರ್ಯ-ಸಮಾನತೆಯ ಪಾಠ ಮಾಡಿದರೂಭಾರತದ ವಿಷಯ ಬಂದಾಗ ತನ್ನ ತಂದೆಯ ಮಾತುಗಳನ್ನೇ ನಂಬಿ "ಭಾರತೀಯರು ಅನಾಗರಿಕರುಅವರನ್ನು ಬ್ರಿಟಿಷರೇ ಆಳಬೇಕು" ಎಂದು ವಾದಿಸಿದನು. ಇದರಲ್ಲಿ ಅವನ ಕಪಟತನ ಎದ್ದು ಕಾಣುತ್ತಿತ್ತು. 
  • ಮಾರ್ಕ್ಸ್‌ವಾದದ 'ವರ್ಗ ಸಂಘರ್ಷ'ದ ಕಸಿ:ಕಾರ್ಲ್ ಮಾರ್ಕ್ಸ್ ತನ್ನ ಸಿದ್ಧಾಂತಗಳನ್ನು ರೂಪಿಸುವಾಗ ಲಂಡನ್‌ನಲ್ಲಿದ್ದನು ಮತ್ತು ಆತ ಭಾರತವನ್ನು ಅರ್ಥಮಾಡಿಕೊಳ್ಳಲು ಬಳಸಿದ್ದು ಇದೇ ಜೇಮ್ಸ್ ಮಿಲ್‌ನ ಬರಹಗಳನ್ನು! ಭಾರತಕ್ಕೆ ಎಂದೂ ಬಾರದೇ ಮಿಲ್ ಸೃಷ್ಟಿಸಿದ್ದ "ಬ್ರಾಹ್ಮಣರು ಶೋಷಕರು - ಉಳಿದವರು ಶೋಷಿತರು" ಎಂಬ ಕಲ್ಪನೆಯನ್ನು ಮಾರ್ಕ್ಸ್ ತನ್ನ 'ವರ್ಗ ಸಂಘರ್ಷ' ಸಿದ್ಧಾಂತಕ್ಕೆ ಕಸಿ ಮಾಡಿದನು. ನಂತರ ಬಂದ ಭಾರತದ ಮಾರ್ಕ್ಸ್‌ವಾದಿ ಇತಿಹಾಸಕಾರರು ಇದೇ ಸುಳ್ಳನ್ನು ನಮ್ಮ ಪಠ್ಯಪುಸ್ತಕಗಳಲ್ಲಿ ತುಂಬುತ್ತಾ ಬಂದರು.


ವಾಸ್ತವದ ವ್ಯತ್ಯಾಸ

ಧರ್ಮಶಾಸ್ತ್ರಗಳ ಪ್ರಕಾರ ಭಾರತದಲ್ಲಿ ಬ್ರಾಹ್ಮಣನಿಗೆ ಇದ್ದ ಕರ್ತವ್ಯಗಳಲ್ಲಿ ಪ್ರಮುಖವಾದದ್ದು 'ದಾನ ಪಡೆಯುವುದು ಮತ್ತು ದಾನ ನೀಡುವುದು'. ಕೇವಲ ದಾನ ಮತ್ತು ಭಿಕ್ಷೆಯ ಆಧಾರದ ಮೇಲೆಕನಿಷ್ಠ ಅವಶ್ಯಕತೆಗಳೊಂದಿಗೆ ಬದುಕುವ ಒಂದು ಸಮುದಾಯ ಎಂದಿಗೂ ಆರ್ಥಿಕವಾಗಿ ಅಥವಾ ರಾಜಕೀಯವಾಗಿ ಶಕ್ತಿಶಾಲಿಯಾಗಲು ಸಾಧ್ಯವೇ ಇಲ್ಲ. ಅದಕ್ಕಾಗಿಯೇ ಇಂದಿಗೂ ಭಾರತದ ಬಹುತೇಕ ಭಾಗಗಳಲ್ಲಿ ಬ್ರಾಹ್ಮಣರು ತೀರಾ ಬಡತನದಲ್ಲಿದ್ದಾರೆ. ವಸಾಹತುಶಾಹಿಗಳು ಕೇವಲ ಬ್ರಾಹ್ಮಣರನ್ನು ಶೋಷಕರನ್ನಾಗಿ ಬಿಂಬಿಸಿದ್ದಷ್ಟೇ ಅಲ್ಲದೆಭಾರತದಾದ್ಯಂತ ಇದ್ದ ನೂರಾರು ಶ್ರಮಿಕ ಜಾತಿಗಳುಕರಕುಶಲ ಸಮುದಾಯಗಳು ಮತ್ತು ಬುಡಕಟ್ಟುಗಳಲ್ಲಿದ್ದ ಅದ್ಭುತ ತಾಂತ್ರಿಕವೈದ್ಯಕೀಯ ಹಾಗೂ ಸಾಂಪ್ರದಾಯಿಕ ಜ್ಞಾನ ಪರಂಪರೆಯನ್ನು 'ಅನಾಗರಿಕಎಂದು ಹಣೆಪಟ್ಟಿ ಕಟ್ಟಿ ವ್ಯವಸ್ಥಿತವಾಗಿ ನಾಶಪಡಿಸಿದರು. ಆದರೆ ಬ್ರಿಟಿಷರು ಮತ್ತು ಮಾರ್ಕ್ಸ್‌ವಾದಿಗಳು ಸೃಷ್ಟಿಸಿದ ಇತಿಹಾಸಕ್ಕೂಇಂದಿನ ವಾಸ್ತವಕ್ಕೂ ಯಾವುದೇ ಸಂಬಂಧವೇ ಇಲ್ಲ!


ನಮ್ಮ ಮುಂದಿರುವ ದಾರಿ: 'ಅವಿದ್ಯೆ'ಗೆ 'ವಿದ್ಯೆ'ಯೇ ಮದ್ದು

ಸ್ವತಂತ್ರ ಭಾರತದ ಇಂದಿನ ಸಾಮಾಜಿಕ ನೀತಿಗಳುಪಠ್ಯಗಳು ಇಂದಿಗೂ ಜೇಮ್ಸ್ ಮಿಲ್ ಅಂದು ಸೃಷ್ಟಿಸಿದ ಬೌದ್ಧಿಕ ಚೌಕಟ್ಟಿನ ಆಧಾರದ ಮೇಲೆಯೇ ನಡೆಯುತ್ತಿರುವುದು ನಮ್ಮ ದುರಂತ. ವಿಶ್ವವಿದ್ಯಾಲಯಗಳಲ್ಲಿ ಅಥವಾ ಮಾಧ್ಯಮಗಳಲ್ಲಿ ಯಾರಾದರೂ ಭಾರತದ ಪರಂಪರೆಯ ಸತ್ಯವನ್ನು ಮಾತನಾಡಿದರೆತಕ್ಷಣವೇ ಅವರನ್ನು "ಬಲಪಂಥೀಯರು" ಅಥವಾ "ಮೂಢರು" ಎಂದು ಹಣೆಪಟ್ಟಿ ಕಟ್ಟುವುದು ಇದೇ ಮಾರ್ಕ್ಸ್‌ವಾದಿ-ಉದಾರವಾದಿ ಕೂಟ. ಯಾಕೆಂದರೆಭಾರತೀಯ ಪರಂಪರೆ ಶ್ರೇಷ್ಠವಾದದ್ದು ಎಂದು ಒಪ್ಪಿಕೊಂಡರೆ ಅವರ ಇಡೀ ಸುಳ್ಳಿನ ಸಾಮ್ರಾಜ್ಯವೇ ಕುಸಿದು ಬೀಳುತ್ತದೆ.

ಭಾರತವು ಮೂಲತಃ ಒಂದು ಜ್ಞಾನದ ನಾಗರಿಕತೆಬ್ರಿಟಿಷರು ಸೃಷ್ಟಿಸಿದ ಈ ಎರಡು ಶತಮಾನಗಳ ಸುಳ್ಳಿನ ಕೋಟೆಯನ್ನು ಮತ್ತು ಅಜ್ಞಾನವನ್ನು (ಅವಿದ್ಯೆ) ಕೇವಲ ರಾಜಕೀಯ ಘೋಷಣೆಗಳಿಂದ ಮುರಿಯಲು ಸಾಧ್ಯವಿಲ್ಲ. ಅದಕ್ಕೆ ಕೇವಲ ಜ್ಞಾನ (ವಿದ್ಯೆ) ಒಂದೇ ಮದ್ದು. ಉದಾಹರಣೆಗೆವೇದಗಳನ್ನು ದೂಷಿಸುವ ಶೇಕಡಾ 99 ರಷ್ಟು ಜನ ಅದನ್ನು ಓದಿಯೇ ಇರುವುದಿಲ್ಲ.

ನಾವು ನಮ್ಮ ಮೂಲ ಗ್ರಂಥಗಳನ್ನುಶಾಸ್ತ್ರಗಳನ್ನು ಮತ್ತು ನಿಜವಾದ ಇತಿಹಾಸವನ್ನು ಸ್ವತಃ ಆಳವಾಗಿ ಅಧ್ಯಯನ ಮಾಡಿ ಸತ್ಯವನ್ನು ಹೊರತಂದಾಗ ಮಾತ್ರ ನಮ್ಮ ಮನಸ್ಸುಗಳು ನಿಜವಾಗಿ ವಸಾಹತುಶಾಹಿಯಿಂದ ಮುಕ್ತವಾಗುತ್ತವೆ. ನಮ್ಮ ಇತಿಹಾಸವನ್ನು ನಮ್ಮದೇ ಕಣ್ಣುಗಳಿಂದ ನೋಡುವ ಕಾಲ ಈಗ ಬಂದಿದೆ. ಆದರೆ ಇಂದಿಗೂ ಈ ಸುಳ್ಳಿನ ವಾಟ್ಸಾಪ್ ಯೂನಿವರ್ಸಿಟಿಯ ಪಳೆಯುಳಿಕೆಗಳು ಭಾರತದ ಸಮಾಜವನ್ನು ವಿಭಜಿಸುವ, ವರ್ಗ ಸಂಘರ್ಷ ಸೃಷ್ಟಿ ಮಾಡುವ ಹಳೆ ಕಟ್ಟು ಕಥೆಯ ಪಟ್ಟುಗಳನ್ನ ನಿರಂತರವಾಗಿ ಹಾಕುತ್ತಲೆ ಇರುತ್ತವೆ. ಉದಾಹರಣೆಗೆ ಇಂದಿನ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದ ರಾಜ್ ಅವರು ಒಂದು ಸಂದರ್ಶನದಲ್ಲಿ ‘ಘಜ್ನಿ ಮುಹಮ್ಮದ ಭಾರತದ ಮೇಲೆ 17 ಬಾರಿ ಆಕ್ರಮಣ ಮಾಡಿದಾಗ ನೇರವಾಗಿ ದೇವಾಲಯಗಳ ಮೇಲೆ ಬೀಳುತಿದ್ದ ಮುಖ್ಯವಾಗಿ ಸೋಮನಾಥ ದೇವಾಲಯದ ಮೇಲೆ, ಅವನಿಗೆ ಈ ದೇವಸ್ಥಾನಗಳ ಬಗ್ಗೆ ಮಾಹಿತಿ ಕೊಡ್ತಾ ಇದ್ದಿದ್ದು ಗುಜರಾತಿನ ಬ್ರಾಹ್ಮಣರು ಮತ್ತು ಬನಿಯಾಗಳು’  ಎಂದು ಯಾವುದೇ ಅಂಜಿಕೆ ಇಲ್ಲದೆ ಸುಳ್ಳನ್ನ ಹೇಳಿದರು. ಆದರೆ ಅವರು ಇದನ್ನು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ (ಎಡಪಂಥದ ವಿರೋದಿಗಳು) ಬೇರೆಯ ರೀತಿ ಹೇಳುತ್ತಾರೆ ಎಂದಾಗ ಅದು ಹಾಸ್ಯಾಸ್ಪದವಾಗಿ ಕಂಡಿತು ಯಾಕೆಂದರೆ ತಾವೇ ನಿಜವಾದ ವಾಟ್ಸಾಪ್ ಯೂನಿವರ್ಸಿಟಿ ಪ್ರೊಫೆಸರ್ ಅನ್ನೋದನ್ನ ಮುಚ್ಚಿಡಲು ಇವರು ಆಡಿದ ಕಪಟ ನಾಟಕ ಅದು.

ವಾಸ್ತವದಲ್ಲಿ, ಆ ರೀತಿಯ ಯಾವುದೇ ಘಟನೆ ನಡೆದಿಲ್ಲ, ಇದನ್ನ ಮಾರ್ಕ್ಸಿಸ್ಟ ಇತಿಹಾಸಕಾರರು ಕೂಡ ಅನುಮೋದಿಸಲಾರರು ಕಾರಣವೆನೆಂದರೆ ಘಜ್ನಿ ಮುಹಮ್ಮದನ ಜೊತೆಗೆ ಬಂದಿದ್ದ ಶ್ರೇಷ್ಠ ವಿದ್ವಾಂಸ ಅಲ್-ಬಿರೂನಿ ತನ್ನ ಕಿತಾಬ್-ಉಲ್-ಹಿಂದ್ ನಲ್ಲಿ ಭಾರತದ ಸಮಾಜ, ಬ್ರಾಹ್ಮಣರ ಜ್ಞಾನ ವ್ಯವಸ್ಥೆ ಮತ್ತು ಧರ್ಮದ ಬಗ್ಗೆ ವಿವರವಾಗಿ ಬರೆದಿದ್ದಾನೆ, ಹಾಗೆಯೇ ಮುಹಮ್ಮದನ ದಾಳಿಗಳು ಹಿಂದೂ ಸಮಾಜ ಧ್ವಂಸ ಮಾಡಿದ್ದರ ಬಗ್ಗೆ ಮತ್ತು ಅವು ಹೇಗೆ ಜನರಲ್ಲಿ ತೀವ್ರ ಮುಸ್ಲಿಂ ವಿರೋಧ ಉಂಟುಮಾಡಿತು ಅಂತಲೂ ಬರೆದಿದ್ದಾನೆ, ಆದರೆ ಮುಕುಂದ ರಾಜ್ ಅವರು ಹೇಳಿದ್ದರ ಬಗ್ಗೆ ಉಲ್ಲೇಖ ಇಲ್ಲ, ಅಷ್ಟೇ ಅಲ್ಲದೆ, ಘಜ್ನಿ ಮುಹಮ್ಮದನ ಅಧಿಕೃತ ಇತಿಹಾಸಕಾರ ಅಲ್-ಉತ್ಬಿ ತನ್ನ ತಾರೀಖ್-ಇ-ಯಾಮಿನಿಯಲ್ಲಿ ಮುಹಮ್ಮದನ ಪ್ರತಿಯೊಂದು ದಂಡಯಾತ್ರೆ, ಆತನ ಸೈನ್ಯದ ಕಾರ್ಯಾಚರಣೆ ಮತ್ತು ಸ್ಥಳೀಯ ರಾಜರುಗಳು ನೀಡಿದ ಪ್ರತಿರೋದದ ವಿವರಗಳನ್ನ ಬರೆದಿದ್ದಾನೆ. ಅದರಲ್ಲೂ ನಮ್ಮ ವಾಟ್ಸಾಪ್ ಯೂನಿವರ್ಸಿಟಿ ಪ್ರೊಫೆಸರರು ಹೇಳಿದ ಆ ಸುಳ್ಳು ಇಲ್ಲ.

ಐತಿಹಾಸಿಕ ಸತ್ಯಗಳನ್ನೆ ತಿರುಚಿ ಜನರಿಗೆ ಮಂಕುಬೂದಿ ಎರಚುತ್ತಿರುವ ಜೇಮ್ಸ್ ಮಿಲ್ ಮತ್ತು ಕಾರ್ಲ್ ಮಾರ್ಕ್ಸ್ ಸಂತತಿಗಳ ಅಂತ್ಯ ಬೇಗ ಆಗಲಿ ಎಂದು ಆಶಿಸೋಣ.

✍🏼 ಕಿರಣ್ ಬಿ 


No comments:

Post a Comment

ಬೌದ್ಧಿಕ ಗುಲಾಮಗಿರಿಯ ಅಸಲಿ ಸೂತ್ರಧಾರ: ವಾಟ್ಸಾಪ್ ಯೂನಿವರ್ಸಿಟಿ ಕರ್ತೃ...

June 19, 2026 ಬೌದ್ಧಿಕ ಗುಲಾಮಗಿರಿಯ ಅಸಲಿ ಸೂತ್ರಧಾರ: ವಾಟ್ಸಾಪ್ ಯೂನಿವರ್ಸಿಟಿ ಕರ್ತೃ... ಭಾರತಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿವೆ. ಬ್ರಿಟಿಷರು ದೈಹಿಕವಾಗಿ ...