December 2, 2024
ಭಾರತದ ಮೊದಲ ಶಿಕ್ಷಣ ಮಂತ್ರಿ
ಮೌಲಾನ ಅಬುಲ್ ಕಲಾಂ ಆಜಾದ್ ರ ಸ್ಮರಣೆಗಾಗಿ ಅವರ ಜನ್ಮ ದಿನವಾದ ನವೆಂಬರ್11ರಂದು ರಾಷ್ಟ್ರೀಯ
ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತದೆ. 2008 ರಲ್ಲಿ ಮೊದಲ ಬಾರಿಗೆ “ರಾಷ್ಟ್ರೀಯ ಶಿಕ್ಷಣ ದಿನ”
ವಾಗಿ ಘೋಷಿಸಿ ಆಚರಣೆ ಪ್ರಾರಂಬಿಸಲಾಯಿತು. ಯಾವ ಮೌಲಾನ ಆಜಾದರ ಜನ್ಮದಿನವನ್ನು ರಾಷ್ಟ್ರೀಯ
ಶಿಕ್ಷಣ ದಿನವನ್ನಾಗಿ ಆಚರಿಸುತ್ತಾರೋ ಅವರ ಬಗ್ಗೆ ಕನಿಷ್ಠ ಮುಖ್ಯಾಂಶಗಳನ್ನಾದರೂ ತಿಳಿದುಕೊಳ್ಳಲೆ
ಬೇಕು.
ಆಜಾದರು ಜನಿಸಿದ್ದು ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಮತ್ತು ಅವರ ತಂದೆ ಇಸ್ಲಾಂನ ವಿಧ್ವಾಂಸರಾಗಿದ್ದರಿಂದ ಅವರ ಶಿಕ್ಷಣ ಇಸ್ಲಾಂನ ಸಾಂಪ್ರದಾಯಿಕ ಪದ್ದತಿಯಂತೆಯೇ ಅರೇಬಿಕ್ ಭಾಷೆಯಲ್ಲಿ ಆಯಿತು. ಅವರು ಪರ್ಶಿಯನ್ ಜೊತೆಗೆ ಬೆಂಗಾಲಿ, ಹಿಂದಿ, ಇಂಗ್ಲಿಷ್ ಹಾಗೂ ಉರ್ದು ಭಾಷೆಗಳನ್ನ ಬಲ್ಲವರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ತಂದೆಯೊಂದಿಗೆ ಭಾರತಕ್ಕೆ ಮರಳಿದ ನಂತರ ಆಜಾದರ ಇಸ್ಲಾಂನ ಸಾಂಪ್ರದಾಯಿಕ ಶಿಕ್ಷಣ ಮುಂದುವರೆಯಿತು, ಇವರು ಕುರಾನನ್ನು ಆಳವಾಗಿ ಅಧ್ಯಯನ ಮಾಡಿ ವ್ಯಾಖ್ಯಾನಗಳನ್ನ ಬರೆಯುತ್ತಾ ಮೌಲಾನ ಆದವರು..!
ಮೌಲಾನ ಆಜಾದರು ಚಿಕ್ಕ ವಯಸ್ಸಿನಲ್ಲಿಯೇ ಇಸ್ಲಾಂ ಕುರಿತ ಲೇಖನಗಳನ್ನ ಬರೆಯುತ್ತಾ ಕೇವಲ 16ನೇ ವಯಸ್ಸಿಗೆ ತಮ್ಮ ಸ್ವಂತ ಮಾಸಿಕ ಪತ್ರಿಕೆಯನ್ನು ಸಂಪಾದಿಸಿದವರು..! ಕ್ರಿ ಶ. 1908 ರಲ್ಲಿ ತಮ್ಮ 20ನೇ ವಯಸ್ಸಿಗೆ ಇಸ್ಲಾಂ ರಾಷ್ಟ್ರಗಳಾದ ಈಜಿಪ್ಟ್ , ಸಿರಿಯ, ಇರಾಕ್, ಟರ್ಕಿ ಗಳ ಪ್ರವಾಸ ಮಾಡಿ ಅಲ್ಲಿಯ ಇಸ್ಲಾಂನ ಆಗುಹೋಗುಗಳ ಬಗ್ಗೆ ಅಧ್ಯಯನ ಮಾಡಿ ಬಂದರು. ಅಖಿಲ ಇಸ್ಲಾಂ (Pan Islam) (ದೇಶ, ಗಡಿಗಳಿಲ್ಲದ ಇಸ್ಲಾಂ ಪ್ರಪಂಚ) ತತ್ವದಲ್ಲಿ ಅಪಾರ ನಂಬಿಕೆ ಉಳ್ಳವರಾಗಿದ್ದರು.
ಆಜಾದರು ಕ್ರಿ.ಶ. 1912 ರಲ್ಲಿ ‘ಅಲ್ ಹಿಲಾಲ್’ ಎನ್ನುವ ವಾರ ಪತ್ರಿಕೆ ಆರಂಬಿಸಿ ಅದರ ಮೂಲಕ ಶುದ್ಧ ಇಸ್ಲಾಂ ಮತ ಪ್ರಚಾರದ ಜೊತೆ ಭಾರತದ ಸ್ವಾತಂತ್ರದ ಚಳುವಳಿಯಲ್ಲಿ ಮುಸಲ್ಮಾನರು ಭಾಗವಹಿಸಲು ಪ್ರೇರೇಪಿಸುತ್ತಿದ್ದರು. ಆ ಪತ್ರಿಕೆಯು ಪ್ರಾರಂಭವಾಗಿ ಎರಡು ವರ್ಷಗಳ ನಂತರ 1914 ರಲ್ಲಿ ಬ್ರಿಟಿಷರು ಇದನ್ನ ನಿಷೇದಿಸಿದರು. ಮತ್ತೆ 1916 ರಲ್ಲಿ ಬೇರೆಯ ಹೆಸರಿನಲ್ಲಿ ಪ್ರಾರಂಭಿಸಿದ ಪತ್ರಿಕೆಯೂ 6 ತಿಂಗಳಲ್ಲಿ ನಿಂತಿತು. ಕುರಾನ್ ಭಾಷಾಂತರ ಮಾಡಿ ಕೃತಿಗಳನ್ನ ಬರೆದರು.
ಮೌಲಾನ ಅಜಾದರಿಗೆ ಭಾರತದ ರಾಷ್ಟ್ರವಾದ ಮತ್ತು ಪ್ಯಾನ್ ಇಸ್ಲಾಂ ತತ್ವ ಎರಡೂ ಬೇರ್ಪಡಿಸದ ಸಂಗತಿಗಳಾಗಿದ್ದವು. ಅವರು ಹೀಗೆ ಬರೆಯುತ್ತಾರೆ, “ಸ್ವಾತಂತ್ರಕ್ಕಾಗಿ ಹೋರಾಡುವುದು ಹಿಂದುಗಳಿಗೆ ದೇಶ ಭಕ್ತಿಯ ವಿಚಾರ ಆಗಿರಬಹುದು, ಆದರೆ ಅದು ಮುಸಲ್ಮಾನರಿಗೆ ಕುರಾನ್ ಪ್ರಕಾರ ಧಾರ್ಮಿಕವಾದದ್ದು” (Dec 18,2012, ಅಲ್ ಹಿಲಾಲ್). ಇಲ್ಲಿ ಆಜಾದರು ಪ್ರತಿಪಾದಿಸುತ್ತಿರುವುದು ಗಜ್ವ ಎ ಹಿಂದ್ ನ ಸಿದ್ದಾಂತವನ್ನ ಎಂದು ಕುರಾನ್ ಮತ್ತು ಹದಿತ್ ಗಳ ಬಗ್ಗೆ ಗೊತ್ತಿದ್ದವರಿಗೆ ಸುಲಭವಾಗಿ ಅರ್ಥವಾಗುವ ವಿಷಯ. ಗಜ್ವಾ ಎ ಹಿಂದ್ ಎಂದರೇ "ಭಾರತದ ಮೇಲೆ ಯುದ್ದ" ಎಂದರ್ಥ, ಪ್ಯಾಲೆಸ್ಟೀನ್ ಪರ, ಪಾಕಿಸ್ತಾನ ಪರ ಘೋಷಣೆ ಮಾಡೋ ಭಾರತೀಯರು ಕಾಣಸಿಗಲು ಇದೆ ಗಜ್ವಾ ಎ ಹಿಂದ್ ಕಾರಣವಿರಬಹುದು.
ಹಿಂದೂಗಳ ಜೊತೆಗೂಡಿ ಬ್ರಿಟಿಷರ ವಿರುದ್ದ ಹೋರಾಡಲು ಸಮರ್ಪಿತ ಮುಸಲ್ಮಾನರ ಒಂದು ಪಡೆಯನ್ನ ರಚಿಸುವ ಸಲುವಾಗಿ ಏಪ್ರಿಲ್ 1913ರಲ್ಲಿಅವರ ಪತ್ರಿಕೆಯಲ್ಲಿ ಕರೆ ಕೊಟ್ಟಾಗ ಕೇವಲ ಒಂದು ವಾರದಲ್ಲಿ 800 ಜನ ಮುಸಲ್ಮಾನರು ನೋಂದಾಯಿಸಿದ್ದರು. ಡಿಸೆಂಬರ್ 1913ರಲ್ಲಿ ಆಜಾದರು ‘ಹಿಜ್ಬುಲ್ಲಾ’ (Party of God) ಸ್ಥಾಪಿಸಿರುವುದಾಗಿ ಘೋಷಿಸುತ್ತಾರೆ. ಇದರ ಮೂಲಕ ಇಸ್ಲಾಂ ತತ್ವಕ್ಕೆ ಬದ್ದರಾದವರು ‘ದೇವರ ಇಚ್ಚೆಯಂತೆ ಜನರ ಒಳಿತಿಗಾಗಿ ವ್ಯವಸ್ಥಿತ ಸರಕಾರವನ್ನು ಸ್ಥಾಪಿಸಲು ಪ್ರಯತ್ನಿಸುತ್ತಾರೆ’. “ಅದರ ನಿಯಂತ್ರಣ ಮಂಡಳಿಯ ಕಾರ್ಯ ಮತ್ತು ವಿಧಾನಗಳು ಗುಪ್ತವಾಗಿರುತ್ತವೆ” ಎಂದು ಬರೆದಿದ್ದರು. ಆದರೆ ತಮ್ಮ ಮಹತ್ವ ಕಡಿಮೆ ಆಗಬಹುದು ಅನ್ನುವ ಭಯದಲ್ಲಿ ಉಲೇಮ(ಇಸ್ಲಾಂನ ಅಧಿಕೃತ ವಖ್ತಾರರು) ಗಳು ಬೆಂಬಲ ಕೊಡಲಿಲ್ಲ. ಇದರಿಂದಾಗಿ ಹಿಜ್ಬುಲ್ಲಾ ಯಶಸ್ವಿ ಆಗಲಿಲ್ಲ. ಒಂದು ವೇಳೆ ಅಂದು ಹಿಜ್ಬುಲ್ಲಾ ಯಶಸ್ವಿ ಆಗಿದ್ದರೆ, ಇಂದು ಲೆಬನಾನ್ ನ ಹಿಜ್ಬುಲ್ಲಾಗಳು ಕಾಫಿರರ ನಾಶಕ್ಕೆ ತೊಡಗಿದಂತೆ ಅಜಾದರ ಹಿಜ್ಬುಲ್ಲಾ ಭಾರತೀಯ ಹಿಂದೂಗಳ ನಾಶಕ್ಕೆ ನಿಲ್ಲುತ್ತಿದ್ದವೇ ಎಂಬ ಪ್ರಶ್ನೆ ಮೂಡದಿರದು.
ಅಜಾದರು 1914ರಲ್ಲಿ ಹಿಜ್ಬುಲ್ಲಾ ವಿಫಲತೆ ಬಗ್ಗೆ ಹೀಗೆ ಬರೆಯುತ್ತಾರೆ, “ಉಲೇಮಗಳು ಮತ್ತು ಸೂಫಿ ಪಂಗಡಗಳ ಮುಖ್ಯಸ್ತರಿಗೆ ಅವರ ಕರ್ತವ್ಯಗಳನ್ನ ನೆನಪಿಸುತ್ತೇನೆಂದು ಬಯಸಿದ್ದೆ, ಇಂತ ಸವಾಲಿನ ಸಮಯದಲ್ಲಿ ನನ್ನ ಜೊತೆ ನಿಲ್ಲುತ್ತಾರೆಂದುಕೊಂಡೆ ಆದರೆ ಒಬ್ಬರನ್ನು ಬಿಟ್ಟು ಉಳಿದೆಲ್ಲರೂ ಇದೊಂದು ಪ್ರಲೋಭನೆ ಎಂದು ತಿರಸ್ಕರಿಸಿದರು..!” ಸೂಫಿಗಳು ಮತ್ತು ಉಲೇಮಾಗಳಿಗೆ ಅವರ ಯಾವ ಕರ್ತವ್ಯ ನೆನಪಿಸಲು ಇಚ್ಚಿಸಿದ್ದರು ಎಂದು ಆಲೋಚಿಸಿದರೆ, "ಗಜ್ವಾ ಎ ಹಿಂದ್" "ದಾರುಲ್ ಹರಬ್ ನಿಂದ ದಾರುಲ್ ಇಸ್ಲಾಂಗೆ" ತತ್ವದ ಬಗ್ಗೆ ಇರಬಹುದು ಎಂದು ಅನ್ನಿಸದೆ ಇರಬಹುದು.
ನಂತರ ಮೌಲಾನರು ಹೆಚ್ಚು ಪ್ರವರ್ಧಮಾನಕ್ಕೆ ಬಂದಿದ್ದು ಖಿಲಾಫತ್ ಚಳುವಳಿಯ ಮೂಲಕ. ಈ ಚಳುವಳಿಯಲ್ಲಿ ಅವರು ಸಂಪೂರ್ಣವಾಗಿ ತೊಡಗಿಸಿಕೊಂಡು ಖಿಲಾಫತ್ ಸಮಿತಿಯ ಅಧ್ಯಕ್ಷರೂ ಆದರು. ಈ ಖಿಲಫತ್ ಚಳುವಳಿಯ ಉದ್ದೇಶ ದೂರದ ಟರ್ಕಿಯ ಒಟ್ಟೊಮನ್ ಸಾಮ್ರಾಜ್ಯದ ಸುಲ್ತಾನನನ್ನು ಇಸ್ಲಾಮಿನ ಖಲೀಫನಾಗಿ ಉಳಿಸಿಕೊಳ್ಳುವುದಾಗಿತ್ತು. ಅಂದರೆ ಭಾರತದ ಸ್ವಾತಂತ್ರಕ್ಕೂ ಈ ಖಿಲಾಫತ್ ಗೂ ಏನೂ ಸಂಭಂದವಿಲ್ಲ. ಅಜಾದರ ಇಸ್ಲಾಂ ಬಗೆಗಿನ ಕಾಳಜಿ ಕಣ್ಣಿಗೆ ರಾಚುವಂತದ್ದು.
1921 ರಲ್ಲಿ ಖಿಲಾಫತ್ ಹೋರಾಟದ
ಸಂಧರ್ಭ ಅಜಾದರು, ಬ್ರಿಟಿಷರ ವಿರುದ್ದ ಹೋರಾಡಲು ಮುಸಲ್ಮಾನರಿಗೆ ಕರೆ ಕೊಟ್ಟು ಹಿಂದೂ-ಮುಸ್ಲಿಂ
ಸಹಕಾರದ ಮಹತ್ವವನ್ನು ಪ್ರವಾದಿ ಮೊಹಮ್ಮದರ ಉದಾಹರಣೆಯೊಂದಿಗೆ ವಿವರಿಸುತ್ತಾರೆ.
ಪ್ರವಾದಿ ಮೊಹಮ್ಮದರು ಮದೀನಾಕ್ಕೆ ವಲಸೆ ಬಂದಾಗ, ಅಲ್ಲಿದ್ದ ಯಹೂದೀ ಜನರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು, ಕೊನೆಯಲ್ಲಿ ಮುಸಲ್ಮಾನರು-ಮುಸಲ್ಮಾನೇತರರು ಒಂದು ದೇಶವಾಗುವರು(ಉಮ್ಮಹ್ ವಹೀದಹ್) ಎಂದು ಆ ಒಪ್ಪಂದದಲ್ಲಿ ಬರೆದಿತ್ತು. ಉಮ್ಮಹ್ = ಕೋಮು ಅಥವಾ ದೇಶ, ವಹೀದಹ್=ಒಂದು. ಭಾರತದ ಮುಸಲ್ಮಾನರು ತಮ್ಮ ಕರ್ತವ್ಯ ನಿರ್ವಹಣೆಯನ್ನ ಹಿಂದೂಗಳ ಸಹಕಾರವಿಲ್ಲದೆ ಮಾಡಲಾಗದು. ಇದು ಪ್ರವಾದಿ ಮೊಹಮ್ಮದರ ಜೀವನದ ಘಟನೆಯನ್ನೇ ಆಧರಿಸಿದ್ದು ಮತ್ತು ಪ್ರವಾದಿಗಳೇ ಮುಸ್ಲಿಂ ಮತ್ತು ಮುಸ್ಲಿಮೇತರ ದೇಶ ರಚಿಸಲು ಬಯಸಿದ್ದು. ಇಂತ ಉದಾಹರಣೆ ನಾವು ಪಾಲಿಸಿ, ಹಿಂದೂಗಳ ಜೊತೆ ಸಹಕಾರದಿಂದ ನಡೆದುಕೊಂಡು ಮೊದಲು ಬ್ರಿಟಿಷರ ಗುಲಾಮಿತನದಿಂದ ಮುಕ್ತರಾಗಬೇಕು, ನಂತರ ಉಳಿದದ್ದನ್ನು ನೋಡಿಕೊಳ್ಳಬಹುದೆಂದು ಪ್ರತಿಪಾದಿಸಿದರು. (ಪು.118, Muslim Politics) ಅಂದಹಾಗೆ, ಈಗ ಮೆಕ್ಕಾದಲ್ಲಿ ಯಹೂದಿಗಳು ಸಿಗಲು ಸಾಧ್ಯವೇ..? ಅಂದರೆ ಇತಿಹಾಸಕಾರರು ಚಿತ್ರಿಸಿರುವ ಹಿಂದೂ ಮುಸ್ಲಿಂ ಐಕ್ಯತೆ ಕೇವಲ ಅನುಕೂಲಸಿಂಧು ಎಂಬುದ ಅರಿಯಬೇಕಿದೆ.
ಮೌಲಾನ ಆಜಾದರು ಜಾಮಿಯ ಮಿಲಿಯ
ಇಸ್ಲಾಮಿಯ ಸ್ಥಾಪನೆಯಲ್ಲಿ ಮಹತ್ತರವಾದ ಪಾತ್ರ ವಹಿಸಿದರು. ಈ ಎಲ್ಲದರಿಂದ ಅರ್ಥವಾಗುವುದು,
ಆಜಾದರು ಒಬ್ಬ ನಿಷ್ಠಾವಂತ ಇಸ್ಲಾಂವಾದಿ ಆಗಿದ್ದಷ್ಟೆ ಅಲ್ಲದೆ,
ವಿಭಜನೆ ವಿರೋದಿಸಿದ ಅವರು ಅಖಂಡ ಭಾರತವನ್ನು ಇಸ್ಲಾಂ ಆಳ್ವಿಕೆಗೆ ಒಳಪಡಿಸಲು
ಬಯಸಿದವರಾಗಿದ್ದರೆಂದು.
ಹೀಗೆ, ಮೌಲಾನ
ಆಜಾದರು ಇಸ್ಲಾಂಗಾಗಿ ಅವಿರತವಾಗಿ ದುಡಿದರು ಹಾಗೂ ಮೊಘಲರ ಅಟ್ಟಹಾಸದ ನೈಜ ಇತಿಹಾಸವನ್ನ
ಶಾಲೆಯಲ್ಲಿ ಮಕ್ಕಳಿಗೆ ಕಲಿಸಿದರೆ ಸಾಮರಸ್ಯ ಹಾಳಾಗುವುದು ಎಂದು ಪ್ರತಿಪಾದಿಸಿದರು. ಅದೇ
ಮಾದರಿಯಲ್ಲಿ ಶಾಲೆಯ ಮಕ್ಕಳಿಗೆ ಸುಳ್ಳು ಅಥವಾ ಪೊಳ್ಳು ಇತಿಹಾಸವನ್ನ ಹೇಳಿಕೊಡುವ ಪರಿಪಾಠ ಇಂದಿಗೂ
ಮುಂದುವರೆದಿರುವುದು ವಿಪರ್ಯಾಸವೆ ಸರಿ. ಹಾಗೂ ಭಾರತದ ಮೂಲ ಸಂಸ್ಕೃತಿಗೆ ಅನುಗುಣವಾದ ಶಿಕ್ಷಣಕ್ಕೆ ಅವರು
ಕೊಟ್ಟ ಕೊಡುಗೆ ನಗಣ್ಯ. ಇವರ ಸ್ಮರಣೆಗಾಗಿ ‘ರಾಷ್ಟ್ರೀಯ
ಶಿಕ್ಷಣ ದಿನ’ ಆಚರಿಸುವುದು ಎಷ್ಟು ಸಮಂಜಸ ಮತ್ತು ಯಾವ ಪುರುಷಾರ್ಥಕ್ಕಾಗಿ ಗೊತ್ತಿಲ್ಲ..!!
~ ಕಿರಣ್.
ಬಿ.
No comments:
Post a Comment