ಹೊಸದಿಗಂತ
ನವೆಂಬರ್ 16, 2024.
ಚುನಾವಣಾ ರಾಜಕೀಯದ ಮೇಲಾಟದಲ್ಲಿ ತಮ್ಮ ಅಭ್ಯರ್ಥಿಯನ್ನ ಗೆಲ್ಲಿಸಲೇ ಬೇಕು, ಪ್ರತಿಯೊಂದು ಸಮುದಾಯವನ್ನ ಹೇಗಾದರೂ ಮಾಡಿ ಓಲೈಸಿ ವೋಟು ಗಿಟ್ಟಿಸಬೇಕು ಎಂದು ಎಲ್ಲ ರೀತಿಯ ತಂತ್ರಗಾರಿಕೆ ಮಾಡುವುದು ಹೊಸದಲ್ಲ. ಆದರೆ ಇತಿಹಾಸವನ್ನೇ ತಿರುಚುವ ಅಥವಾ ನೇರವಾಗಿ ಸುಳ್ಳು ಹೇಳುವ ಹಂತಕ್ಕೆ ಹೋಗುವುದು ಎಷ್ಟು ಸರಿ.
ಹೌದು, ಶಿಗ್ಗಾವಿ ವಿಧಾನಸಭ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೇಸ ಪಕ್ಷದ ಅಭ್ಯರ್ಥಿಯ ಪರ ಪ್ರಚಾರ
ಮಾಡುತ್ತಿದ ಸಯ್ಯದ್ ಅಜ್ಜಂಪೀರ್ ಖಾದ್ರಿಯವರು ಆದಿ ಜಾಂಬವ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ಇಸ್ಲಾಂ ಧರ್ಮ ಸ್ವೀಕಾರ ಮಾಡಲು ಸಿದ್ದತೆ ಮಾಡಿಕೊಂಡಿದ್ದರು ಆದರೆ ಕೊನೆಗೆ
ಬೌದ್ಧ ಧರ್ಮ ಸೇರಿದರು, ಹಾಗೇನಾದರು ಅವರು ಇಸ್ಲಾಂಗೆ ಮತಾಂತರ
ಆಗಿದ್ದರೆ ಇಂದು ಸಮಸ್ತ ದಲಿತ ಸಮಾಜ ಬಾಂಧವರು ಮುಸಲ್ಮಾನರಾಗಿರುತ್ತಿದ್ದರು,
ಡಾ. ಜಿ ಪರಮೇಶ್ವರ್ ಹೋಗಿ ಫೀರ್ ಸಾಹೇಬ್ ಆಗ್ತಿದ್ರು, ಹನುಮಂತಯ್ಯ ಹೋಗಿ
ಹಸನ್ ಸಾಬ್ ಆಗ್ತಿದ್ರು, ಮುಸ್ಲಿಂ-ದಲಿತರ ಸಂಬಂಧ ಅವಿನಾಭಾವದ್ದು
ಅದಕ್ಕಾಗಿಯೇ ದಲಿತ ಕೆರಿಗಳಿದ್ದಲ್ಲೆಲ್ಲಾ ದರ್ಗಾಗಳಿವೆ ಎಂದು ಅವರು ಹೇಳಿದರು.
ರಾಜಕೀಯ ಲಾಭಕ್ಕಾಗಿ ಈ ದಲಿತ-ಮುಸ್ಲಿಂ ಜೋಡಣೆಯ ಹುನ್ನಾರ
ಇಂದು ನಿನ್ನೆಯದಲ್ಲ. ಸ್ವಾತಂತ್ರ ಪೂರ್ವದಿಂದಲೂ ನಡೆದು ಬಂದಿರುವಂತದ್ದು. ಹಾಗಾದ್ರೆ ಅಂಬೇಡ್ಕರರ
ಕುರಿತಾದ ಈ ಹೊಸ ಹೇಳಿಕೆಯಲ್ಲಿ ಎಷ್ಟು ಸತ್ಯತೆ ಅಡಗಿದೆ ಅಂತ ಇತಿಹಾಸದ ಪುಟಗಳನ್ನ ತಿರುವಿದಾಗ
ಕಾಣುವುದು ಬೇರೆಯದೇ ಚಿತ್ರಣ. ಹೈದರಾಬಾದ್ ನಿಜಾಮ ಇಸ್ಲಾಂಗೆ ಮತಾಂತರವಾಗುವಂತೆ ಆಹ್ವಾನ ಕೊಟ್ಟು ಐದು
ಕೋಟಿ ರೂಪಾಯಿಗಳ ಆಮಿಷ ಒಡ್ಡಿದಾಗ ಅಂಬೇಡ್ಕರರು ಅದನ್ನ ಸಾರಾಸಗಟಾಗಿ ತಿರಸ್ಕರಿಸಿದ್ದರು. ಕ್ರೈಸ್ತ ಮಿಷಿನರಿಗಳ
ತಂತ್ರಕ್ಕೂ ಮಣಿದಿರಲಿಲ್ಲ. ಭಾರತೀಯ ಮೂಲ ಸಂಸ್ಕೃತಿಯ ಒಂದು ಭಾಗವೇ ಆಗಿರುವ ಬೌದ್ಧ ಧರ್ಮ
ಸ್ವೀಕರಿಸಿದ್ದರು. ಯಾವುದೇ ವಿದೇಶಿ ಧರ್ಮಕ್ಕೆ ಹೋದರೂ ಅದು ಭಾರತೀಯ ಸಂಸ್ಕೃತಿಯ
ವಿರುದ್ದವಾದದ್ದು ಎಂದು ಬಲವಾಗಿ ನಂಬಿದ್ದವರು. ಅಂತವರು ಇಸ್ಲಾಂಗೆ ಮತಾಂತರವಾಗಲು ಸಿದ್ದತೆ ಮಾಡಿಕೊಂಡಿದ್ದರು
ಅನ್ನುವ ಹೇಳಿಕೆಯಲ್ಲಿ ಹುರುಳೇ ಇಲ್ಲ ಅನ್ನುವುದನ್ನ ಅವರ ಬರಹಗಳಿಂದಲೇ ತಿಳಿದುಕೊಳ್ಳುವ ಹೇರಳ
ಅವಕಾಶ ಇರುವುದು ನಮ್ಮ ಅದೃಷ್ಟವೆ ಸರಿ, ಇಲ್ಲದಿದ್ದರೆ ರಾಜಕಾರಣಿಗಳು
ಹಾರಿಸಿಬಿಡುವ ಸುಳ್ಳುಗಳೇ ಸತ್ಯವೆಂದು ನಂಬುವ ಒಂದು ದೊಡ್ಡ ಅಮಾಯಕ ವರ್ಗವೇ ಇದೆ.
ಬಾಬಾ ಸಾಹೇಬ್ ಅಂಬೇಡ್ಕರರು ಇಸ್ಲಾಂ ಕುರಿತಾದ ತಮ್ಮ
ಖಚಿತವಾದ ನಿಲುವನ್ನು ಅವರ ಕೃತಿ “ಪಾಕಿಸ್ತಾನ ಆರ್ ಪಾರ್ಟೀಷನ್ ಆಫ್ ಇಂಡಿಯ”ದಲ್ಲಿ ಸ್ಪಷ್ಟವಾಗಿ
ಉದಾಹರಣೆಗಳೊಂದಿಗೆ ದಾಖಲಿಸಿದ್ದಾರೆ. ಅದರ ಕೆಲವು ಮುಖ್ಯಾಂಶಗಳನ್ನ ಅವಲೋಕಿಸಿದಾಗ ಸ್ಪಷ್ಟವಾಗುವ
ಒಂದು ವಿಷಯವೆಂದರೆ ಅಜ್ಜಂಪೀರ್ ಖಾದ್ರಿಯವರು ಕೇವಲ ದಲಿತ ಬಾಂಧವರ ಓಟಿಗಾಗಿ ಮಾಡಿದ ತಂತ್ರವೇ
ಹೊರತು ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲವೆಂದು.
- ಮುಸಲ್ಮಾನರು ಭಾರತಕ್ಕೆ
ನಿಷ್ಟೆಯುಳ್ಳವರಾಗಿರಲು ಸಾಧ್ಯವಿಲ್ಲ. 1919 ರಲ್ಲಿ ಭಾರತೀಯ ಮುಸಲ್ಮಾನರು ಮಾಡಿದ ಖಿಲಾಫತ್
ಚಳುವಳಿಯ ಸಮಯದಲ್ಲಿ ಅಫ್ಘಾನಿಸ್ತಾನದ ಅಮೀರ್ ನಿಗೆ ಭಾರತದ ಮೇಲೆ ದಾಳಿ ಮಾಡಲು ಆಹ್ವಾನ
ಕೊಟ್ಟಿದ್ದರು. (ಪುಟ 98)
- ಇಸ್ಲಾಂ ಧರ್ಮದ ತತ್ವ: ಮುಸ್ಲಿಂ ಆಳ್ವಿಕೆಗೆ ಒಳಪಡದ ದೇಶದಲ್ಲಿ ಮುಸ್ಲಿಂ ಕಾನೂನು ಮತ್ತು
ದೇಶದ ಕಾನೂನಿನ ನಡುವೆ ಸಂಘರ್ಷವಿದ್ದಲ್ಲಿ, ಮುಸಲ್ಮಾನರು ದೇಶದ ಕಾನೂನು ದಿಕ್ಕರಿಸಿ ಇಸ್ಲಾಂ ಕಾನೂನನ್ನ ಒಪ್ಪುವುದು ನ್ಯಾಯಸಮ್ಮತ (ಪುಟ
292)
- ಮುಸಲ್ಮಾನರ
ಕಾನೂನಿನಂತೆ ಪ್ರಪಂಚವು ಎರಡು ಭಾಗವಾಗಿದೆ. ಅದು ದಾರುಲ್ ಇಸ್ಲಾಂ (ಇಸ್ಲಾಂನ ಪವಿತ್ರ ಭೂಮಿ) ಮತ್ತು ದಾರುಲ್ ಹರಬ್(ಯುದ್ದ ಭೂಮಿ).
ಮುಸಲ್ಮಾನರ ಆಡಳಿತ ಇರುವ ದೇಶವು ದಾರುಲ್ ಇಸ್ಲಾಂ ಅಂತ ಕರೆಯಲ್ಪಡುತ್ತದೆ. ಮುಸಲ್ಮಾನರು ಕೇವಲ ವಾಸಿಸುತ್ತಿದ್ದು ಅಲ್ಲಿ ಅವರ ಆಡಳಿತವಿಲ್ಲದಿದ್ದರೆ ಅದು ದಾರುಲ್
ಹರಬ್ ಎಂದು ಕರೆಯಲ್ಪಡುತ್ತದೆ. ಹೀಗೆ ಒಂದು ದೇಶವು ಇಸ್ಲಾಂ ದೇಶವಾಗಬಹುದು ಅಥವಾ ಯುದ್ದಭೂಮಿ
ಆಗಬಹುದು. ‘ಹಿಂದೂ-ಮುಸ್ಲಿಮರು ಸಮನಾಗಿ ಜೀವಿಸುವ’ ಭಾರತವು ಮುಸಲ್ಮಾನರಿಗೆ ಎಂದೂ ತಾಯ್ನೆಲವಾಗದು, ಅದು ಕೇವಲ
ಯುದ್ದ ಭೂಮಿ ಅಷ್ಟೇ. (ಪುಟ 294)
- ಭಾರತವು ಒಂದು ವೇಳೆ
ಮುಸ್ಲಿಮರ ಆಳ್ವಿಕೆಗೆ ಒಳಪಡದಿದ್ದರೆ, ಅದು ದಾರುಲ್ ಹರಬ್ ಆಗಿರುತ್ತದೆ ಮತ್ತು ಇಸ್ಲಾಂನ ಪ್ರಕಾರ ಮುಸಲ್ಮಾನರು ಭಾರತದ ಮೇಲೆ
ಜಿಹಾದ್ ಮಾಡಲು ಅವಕಾಶ ನೀಡುತ್ತದಲ್ಲದೆ, ಈ ಕಾರ್ಯ ಯಶಸ್ವಿ ಆಗಲು
ಯಾವುದೇ ವಿದೇಶಿ ಮುಸ್ಲಿಮರ ಸಹಾಯ ತೆಗೆದುಕೊಳ್ಳಬಹುದಾಗಿದೆ ಅಥವಾ ಯಾವುದೇ ವಿದೇಶಿ ಮುಸ್ಲಿಂ
ಶಕ್ತಿಯು ಭಾರತದ ಮೇಲೆ ಜಿಹಾದ್ ಘೋಷಿಸಿದರೆ ಅದಕ್ಕೆ ಮುಸಲ್ಮಾನರು ಸಹಾಯ ಮಾಡಬೇಕು. (ಪುಟ 296)
-
ಮತ್ತೊಂದು
ಮುಖ್ಯ ಅಂಶವೆಂದರೆ, ಗಡಿ ಗುರುತಿಸುವ ಮತ್ತು ಅದಕ್ಕೆ ಒಳಪಡುವುದನ್ನ ಇಸ್ಲಾಂ ಒಪ್ಪುವುದಿಲ್ಲ ಮತ್ತು ಇದುವೆ
ಅಖಂಡ ಇಸ್ಲಾಂ (ಪ್ಯಾನ್ ಇಸ್ಲಾಮಿಸ್ಮ್) ತತ್ವಕ್ಕೆ ಮೂಲಾದಾರ. ಇದುವೇ
ಭಾರತದ ಮುಸಲ್ಮಾನರು ಮೊದಲು ಮುಸಲ್ಮಾನರು ಮತ್ತು ನಂತರದಲ್ಲಿ ಭಾರತೀಯ ಎಂದು ಹೇಳುವುದಕ್ಕೆ ದಾರಿ
ಮಾಡಿ ಕೊಡುವ ತತ್ವ. ಇದು ಭಾರತೀಯ ಮುಸಲ್ಮಾನರು ಯಾಕೆ ಭಾರತದ ಏಳಿಗೆಗೆ ಯಾಕೆ ಕಡಿಮೆ
ದುಡಿದಿದ್ದಾರೆ ಮತ್ತು ಮುಸ್ಲಿಂ ದೇಶಗಳಿಗಾಗಿಯೇ ಅವರನ್ನ ತೊಡಗಿಸಿಕೊಳ್ಳುತ್ತಾರೆ ಮತ್ತು ಅವರ
ಯೋಚನೆಯಲ್ಲಿ ಮುಸ್ಲಿಂ ದೇಶಗಳು ಮೊದಲು ನಂತರ ಭಾರತ ಬರುತ್ತದೆ ಎಂಬುದನ್ನು ವಿವರಿಸುತ್ತದೆ. (ಪುಟ
297)
- ಕೋಮು ಸೌಹಾರ್ದತೆ
ಅಸಾಧ್ಯ: ಮುಸಲ್ಮಾನರು ದೇಶದ ಎಲ್ಲೆಡೆ ಹರಡಿರುವುದರಿಂದ ವಿಭಜನೆಯ ನಂತರವೂ ಭಾರತದಲ್ಲಿ ಉಳಿಯುವುದರಿಂದ
ಏಕರೂಪದ ದೇಶವಾಗಲು ಸಾಧ್ಯವಿಲ್ಲ. ಪಾಕಿಸ್ತಾನ ಮತ್ತು ಭಾರತ ಏಕರೂಪತೆ ತರಲು ಜನಸಂಖ್ಯೆಯ
ವಿನಿಮಯದಿಂದ ಮಾತ್ರ ಸಾಧ್ಯ. ಜನಸಂಖ್ಯೆ ವಿನಿಮಯ ಆಗುವವರೆಗೂ ಬಹುಸಂಖ್ಯಾತ ಮತ್ತು ಅಲ್ಪಸಂಖ್ಯಾತರ
ಸಮಸ್ಯೆ ಮುಂದುವರೆದು ಭಾರತದ ಸಮಾಜದಲ್ಲಿ ಅಶಾಂತಿ ಉಂಟುಮಾಡಲಿದೆ. (ಪುಟ 117)
- ಹಿಂದೂ ಆಡಳಿತ
ಒಪ್ಪಲಾರರು: ಹಿಂದೂಗಳನ್ನೊಳಗೊಂಡ ಸರಕಾರದ ಆಡಳಿತದಲ್ಲಿ ಮುಸಲ್ಮಾನರು ಎಷ್ಟರ ಮಟ್ಟಿಗೆ
ಹೊಂದಿಕೊಳ್ಳುವರು ಅನ್ನುವ ಪ್ರಶ್ನೆ ಎದ್ದರೆ, ಅದಕ್ಕೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇಲ್ಲ, ಮುಸ್ಲಿಮರಿಗೆ
ಹಿಂದೂಗಳೆಂದರೆ ಕಾಫಿರರು. ಕಾಫಿರರು ಗೌರವಕ್ಕೆ ಅನರ್ಹರು. ಅವರು ಕೀಳು,
ಅದಕ್ಕಾಗಿ ಅವರಿಂದ ನಡೆಸಲ್ಪಡುವ ದೇಶವು ದಾರುಲ್ ಹರಬ್, ಹಿಂದೂಗಳ
ಆಡಳಿತವನ್ನು ಮುಸ್ಲಿಮರು ಒಪ್ಪುವುದಿಲ್ಲವೆನ್ನಲು ಇದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾಗಿಲ್ಲ. (ಪುಟ
301)
ಹಿಂದೂ-ಮುಸ್ಲಿಂ ಸಾಮರಸ್ಯದ ಬಗ್ಗೆ ಅಂಬೇಡ್ಕರರನ್ನ
ಉಲ್ಲೇಖಿಸುವ ಸಯ್ಯದ್ ಅಜ್ಜಂಪೀರ್ ಖಾದ್ರಿಯವರು ಈ ವಿಷಯದಲ್ಲಿ ಬಹುಮುಖ್ಯವಾದ ಅವರ ‘ಪಾಕಿಸ್ತಾನ
ಆರ್ ಪಾರ್ಟೀಷನ್ ಆಫ್ ಇಂಡಿಯ’ ವನ್ನು ಯಾಕೆ ಓದಿಕೊಂಡಿಲ್ಲವೆನ್ನುವುದು
ಆಶ್ಚರ್ಯಕರವಾದ ವಿಷಯ.
ಅಂಬೇಡ್ಕರರು ಭಾರತಿಯರಿಗೆ ಎಂದೆಂದಿಗೂ ಆದರ್ಶಪ್ರಾಯರು, ಅವರ ಅಧ್ಯಯನ
ಮತ್ತು ಅನುಭವದಿಂದ ಹತ್ತಾರು ಸಲಹೆಗಳನ್ನ ಕೊಟ್ಟಿದ್ದಾರೆ. ದೇಶ ವಿಭಜನೆಯ ನಂತರ ಪಾಕಿಸ್ತಾನದಲ್ಲಿ
ಸಿಲುಕಿದ ದಲಿತರನ್ನ ಕುರಿತು ನವೆಂಬರ್ 1947
ರಲ್ಲಿ ಅಂಬೇಡ್ಕರರು ಪತ್ರಿಕಾ ಹೇಳಿಕೆ ಕೊಟ್ಟು ಅಲ್ಲಿ ಸಿಲುಕಿರುವ ದಲಿತರು ಯಾವ ಮಾರ್ಗ ಸಿಗುತ್ತದೋ
ಅದನ್ನ ಹಿಡಿದು ತಕ್ಷಣ ಭಾರತಕ್ಕೆ ಬನ್ನಿ, ಪಾಕಿಸ್ತಾನ ಮತ್ತು ಹೈದರಾಬಾದಿನ ಮುಸಲ್ಮಾನರು ನಂಬಿಕೆಗೆ
ಅರ್ಹರಲ್ಲ ಅವರನ್ನ ನಂಬಬೇಡಿ ಅವರು ನಿಮ್ಮಿಂದ ಸಹಾಯ ಪಡೆಯುತ್ತಾರೆ ಆದರೆ ನೀವು ಅವರ
ದೃಷ್ಟಿಯಲ್ಲಿ ಕನಿಷ್ಠ ಮತ್ತು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಒಳಗಾಗಿ ದೌರ್ಜನ್ಯದಿಂದ
ತಪ್ಪಿಸಿಕೊಳ್ಳಲು ಇಸ್ಲಾಂಗೆ ಮತಾಂತರವಾಗಬೇಡಿ ಎಂದು ಕಳಕಳಿಯ ಕರೆ ಕೊಡುತ್ತಾರೆ.
ಹೀಗೆ, ಇಸ್ಲಾಂ ಸೌಹಾರ್ದತೆಗೆ ಪ್ರತಿಕೂಲ ವಾತಾವರಣ ನಿರ್ಮಿಸುತ್ತದೆ ಆ ಮತಕ್ಕೆ
ಮತಾಂತರವಾಗಬೇಡಿ ಎಂದು ಕರೆಕೊಟ್ಟಿದ್ದ ಅಂಬೇಡ್ಕರರು ತಾವೇ ಹೇಗೆ ಅದೇ ಮತಕ್ಕೆ ಸೇರಲು
ಮುಂದಾಗಿದ್ದರು ಎಂದು ಮಾನ್ಯ ಸಯ್ಯದ್ ಅಜ್ಜಂಪೀರ್ ಖಾದ್ರಿಯವರೆ ಸ್ಪಷ್ಟಪಡಿಸಬೇಕು...!!
ಕಿರಣ್. ಬಿ

No comments:
Post a Comment